Snapchat ಕೌಟುಂಬಿಕ ಸುರಕ್ಷತಾ ಕೇಂದ್ರ

Snapchat ಅನ್ನು ಸುರಕ್ಷತೆ ಮತ್ತು ಗೌಪ್ಯತೆಗಾಗಿ ಆದ್ಯತೆ ನೀಡುವಂತಹ ಒಂದು ಪರಿಸರದಲ್ಲಿ ನಿಕಟ ಸ್ನೇಹಿತರು ಮತ್ತು ಕುಟುಂಬದವದೊಂದಿಗೆ ಸಂವಹನವನ್ನು ವರ್ಧಿಸುವುದರ ಮೇಲೆ ಒತ್ತು ನೀಡಲು ಹಾಗೂ ಸಾಂಪ್ರದಾಯಿಕ ಸಾಮಾಜಿಕ ಮಾಧ್ಯಮಗಳಿಂದ ವಿಭಿನ್ನವಾಗಿರಲೆಂದು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿತ್ತು. Snapchat ನ ಕಾರ್ಯವೈಖರಿ, ನಾವು ಹದಿಹರೆಯದವರಿಗಾಗಿ ಒದಗಿಸುವ ಪ್ರಮುಖ ರಕ್ಷಣೆಗಳು, ಹಾಗೂ ನಮ್ಮ ಸುರಕ್ಷತಾ ಸಾಧನಗಳನ್ನು ಬಳಸುವ ವಿಧಾನಗಳ ಕುರಿತು ತಿಳಿದುಕೊಳ್ಳಿ.

ಪೋಷಕರುಗಳಿಗಾಗಿ ಸುರಕ್ಷತೆಯ ಮಾರ್ಗದರ್ಶಿಗಳು

Snapchat ಎಂದರೇನು?

Snapchat ಎನ್ನುವುದು 13 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿರುವ ಒಂದು ಸಂವಹನ ಸೇವೆಯಾಗಿದೆ. ಇದು ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಬಹಳ ಜನಪ್ರಿಯವಾಗಿದೆ, ಅವರು ಪ್ರಾಥಮಿಕವಾಗಿ ತಮ್ಮ ನಿಕಟ ಸ್ನೇಹಿತರೊಂದಿಗೆ ವ್ಯೆಯಕ್ತಿಕವಾಗಿ ಸಂವಹನ ನಡೆಸುವ ವಿಧಾನಗಳಲ್ಲಿಯೇ ಮಾತನಾಡಲು ಇದನ್ನು ಬಳಸುತ್ತಾರೆ.

Snapchat ನಲ್ಲಿ ಹದಿಹರೆಯದವರಿಗಾಗಿ ರಕ್ಷಣೆಗಳು

ನಾವು ಹದಿಹರೆಯದವರಿಗಾಗಿ Snapchat ನಲ್ಲಿ ನಿಕಟ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವುದರ ಮೇಲೆ ಗಮನವಿರಿಸಲು ಸಹಾಯಮಾಡುವುದಕ್ಕಾಗಿ ಹೆಚ್ಚುವರಿ ರಕ್ಷಣೆಗಳನ್ನು ಒದಗಿಸುತ್ತೇವೆ, ಹಾಗೂ ಆ ಮೂಲಕ ಅಪರಿಚಿತರಿಂದ ಅನಗತ್ಯ ಸಂಪರ್ಕವನ್ನು ತಡೆಗಟ್ಟುತ್ತೇವೆ ಹಾಗೂ ವಯಸ್ಸಿಗೆ ಸೂಕ್ತವಾದ ವಿಷಯದ ಅನುಭವವನ್ನು ಒದಗಿಸುತ್ತೇವೆ.

Snapchat ಕೌಟುಂಬಿಕ ಕೇಂದ್ರದ ಬಗ್ಗೆ ಮಾಹಿತಿ

Snapchat ನಲ್ಲಿ ಹದಿಹರೆಯದವರನ್ನು ರಕ್ಷಿಸಲು ನಾವು ನಮ್ಮ ಜವಾಬ್ದಾರಿಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಇದರ ಭಾಗವಾಗಿ, ತಮ್ಮ ಹದಿಹರೆಯದವರು Snapchat ಅನ್ನು ಸುರಕ್ಷಿತವಾಗಿ ಬಳಸಲು ಸಹಾಯ ಮಾಡುವುದಕ್ಕಾಗಿ ನಾವು ಪೋಷಕರಿಗೆ ಆ್ಯಪ್‌ನೊಳಗಿನ ಸರಕ್ಷಾ ಸಾಧನಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತೇವೆ.

Snapchat ನ ಕುರಿತು ಪೋಷಕರಿಗಾಗಿ ವೀಡಿಯೋ ಸಂಪನ್ಮೂಲಗಳು

Snapchat ನ ಕುರಿತು, ಅದು ನಿಮ್ಮ ಕುಟುಂಬವನ್ನು ಸಂಪರ್ಕದಲ್ಲಿರಲು ಹೇಗೆ ಸಹಾಯ ಮಾಡಬಹುದು ಎನ್ನುವುದರ ಕುರಿತು, ಹಾಗೂ ಹದಿಹರೆಯದವರಿಗಾಗಿ Snapchat ಅನ್ನು ಸುರಕ್ಷಿತವನ್ನಾಗಿಸಲು ನಾವು ಅಳವಡಿಸಿಕೊಂಡಿರುವ ರಕ್ಷಣೆಗಳ ಕುರಿತು ತಿಳಿದುಕೊಳ್ಳಲು ಈ ವೀಡಿಯೋಗಳನ್ನು ಅನ್ವೇಷಿಸಿ.

Snapchat ನ ಬಗ್ಗೆ ಮಾಹಿತಿ

Snapchat ಅನ್ನು ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಅಭಿವ್ಯಕ್ತ ಸಂವಹನವನ್ನು ಪೋಷಿಸುವುದಕ್ಕಾಗಿ ರಚಿಸಲಾಗಿದೆ, ಹಾಗೂ ನಾವು ಹದಿಹರೆಯದವರಿಗೆ Snapchat ನಲ್ಲಿ ಆರೋಗ್ಯಕರವಾದ ಮತ್ತು ಸುರಕ್ಷಿತವಾದ ಅನುಭವವನ್ನು ಹೊಂದಲು ಸಹಾಯಮಾಡಲು ಬದ್ಧರಾಗಿದ್ದೇವೆ.


ಪದೇ ಪದೇ ಕೇಳಲಾಗುವ ಪ್ರಶ್ನೆಗಳು

Snapchat ಎಂದರೇನು?

Snapchat ಎನ್ನುವುದು ಬಹುತೇಕ ಜನರು ತಮ್ಮ ನೈಜ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಚ್ಯಾಟಿಂಗ್‌, Snapping (ಚಿತ್ರಗಳ ಮೂಲಕ ಮಾತನಾಡುವುದು), ಅಥವಾ ಧ್ವನಿ ಮತ್ತು ವೀಡಿಯೋ ಕರೆಗಳ ಮೂಲಕ ಸಂಪರ್ಕ ಕಲ್ಪಿಸಲು ಬಳಸುವ ಒಂದು ಸಂವಹನದ ಸೇವೆಯಾಗಿದೆ.

Snapchat ಯಾವುದೇ ವಯಸ್ಸಿನ ಮಿತಿಯನ್ನು ಹೊಂದಿದೆಯೇ?

Snapchat ಖಾತೆಯನ್ನು ರಚಿಸಲು ಹದಿಹರೆಯದವರು ಕನಿಷ್ಟ 13 ವರ್ಷ ವಯಸ್ಸಿನವರಾಗಿರಬೇಕು. ಯಾವುದೇ ಖಾತೆಯು 13 ಕ್ಕಿಂತಲೂ ಕಡಿಮೆ ವಯಸ್ಸಿನ ವ್ಯಕ್ತಿಯದ್ದಾಗಿರುವುದೆಂದು ನಾವು ಕಂಡುಹಿಡಿದರೆ, ನಾವು ಆ ಖಾತೆಯನ್ನು ನಮ್ಮ ಪ್ಲ್ಯಾಟ್‌ಫೊರ್ಮ್‌ನಿಂದ ಕೊನೆಗಾಣಿಸುತ್ತೇವೆ ಹಾಗೂ ಅವರ ದತ್ತಾಂಶವನ್ನು ಅಳಿಸುತ್ತೇವೆ.

ಹದಿಹರೆಯದವರು ನಿಖರವಾದ ಜನ್ಮದಿನವನ್ನು ಒದಗಿಸಿ ಸೈನ್‌ ಅಪ್‌ ಆಗುವುದು ನಿರ್ಣಾಯಕ, ಏಕೆಂದರೆ ಹಾಗೆ ಮಾಡುವ ಮೂಲಕ ಅವರು ಹದಿಹರೆಯದವರಿಗಾಗಿ Snapchat ನ ಸುರಕ್ಷತಾ ರಕ್ಷಣಾಕ್ರಮಗಳಿಂದ ಪ್ರಯೋಜನ ಪಡೆಯಬಹುದಾಗಿದೆ. ಈ ಸುರಕ್ಷತಾ ಕ್ರಮಗಳಿಂದ ತಪ್ಪಿಸಿಕೊಳ್ಳದಂತೆ ಹದಿಹರೆಯದವರನ್ನು ತಡೆಯಲು ನೆರವಾಗುವುದಕ್ಕಾಗಿ, ಪ್ರಸಕ್ತ Snapchat ಖಾತೆಗಳನ್ನು ಹೊಂದಿರುವ 13-17 ವರ್ಷ ವಯಸ್ಸಿನವರಿಗೆ ತಮ್ಮ ಜನ್ಮದಿನಾಂಕವನ್ನು 18 ಅಥವಾ ಹೆಚ್ಚಿನ ವಯಸ್ಸಿಗೆ ಬದಲಾಯಿಸಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ.

Snapchat ಹದಿಹರೆಯದವರನ್ನು ಹೇಗೆ ರಕ್ಷಿಸುತ್ತದೆ?

ನಾವು ಹದಿಹರೆಯದವರಿಗಾಗಿ Snapchat ನಲ್ಲಿ ನಿಕಟ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸುವುದರ ಮೇಲೆ ಗಮನವಿರಿಸಲು ಸಹಾಯಮಾಡುವುದಕ್ಕಾಗಿ ಹೆಚ್ಚುವರಿ ರಕ್ಷಣೆಗಳನ್ನು ಒದಗಿಸುತ್ತೇವೆ, ಹಾಗೂ ಆ ಮೂಲಕ ಅಪರಿಚಿತರಿಂದ ಅನಗತ್ಯ ಸಂಪರ್ಕವನ್ನು ತಡೆಗಟ್ಟುತ್ತೇವೆ ಹಾಗೂ ವಯಸ್ಸಿಗೆ ಸೂಕ್ತವಾದ ವಿಷಯದ ಅನುಭವವನ್ನು ಒದಗಿಸುತ್ತೇವೆ.

Snapchat ನಲ್ಲಿ ಸುರಕ್ಷತೆಯ ಕುರಿತಾದ ಯಾವುದೇ ಕಳವಳವನ್ನು ನಾನು ಹೇಗೆ ವರದಿ ಮಾಡುಬೇಕು?

ಸುರಕ್ಷತೆಯ ಕುರಿತಾದ ಯಾವುದೇ ಕಳವಳವನ್ನು ನಮಗೆ ವರದಿ ಮಾಡುವುದಕ್ಕಾಗಿ ನಾವು ಹದಿಹರೆಯದವರು ಮತ್ತು ಪೋಷಕರಿಬ್ಬರಿಗೂ ಸಹ ಸುಲಭ ಮಾರ್ಗಗಳನ್ನು - ನೇರವಾಗಿ ಆ್ಯಪ್‌ನಲ್ಲಿ ಅಥವಾ Snapchat ಖಾತೆಯನ್ನು ಹೊಂದಿಲ್ಲದವರಿಗಾಗಿ ಆನ್‌ಲೈನ್‌ನಲ್ಲಿ - ಒದಗಿಸುತ್ತೇವೆ.

Snapchat ಗೌಪ್ಯತಾ ಸೆಟ್ಟಿಂಗ್‌ಗಳನ್ನು ಹೊಂದಿದೆಯೇ?

ಹೌದು, ಹಾಗೂ ಪೂರ್ವನಿಯೋಜಿತವಾಗಿ, ನಾವು ಹದಿಹರೆಯದವರಿಗಾಗಿ ಪ್ರಮುಖ ಸುರಕ್ಷತಾ ಮತ್ತು ಗೌಪ್ಯತಾ ಸೆಟ್ಟಿಂಗ್‌ಗಳನ್ನು ಕಟ್ಟುನಿಟ್ಟಾದ ಮಾನದಂಡಗಳಿಗೆ ಹೊಂದಿಸುತ್ತೇವೆ. 

ಎಲ್ಲಾ ಬಳಕೆದಾರರಿಗಾಗಿ ಸಂಪರ್ಕಗಳ ಸೆಟ್ಟಿಂಗ್‌ಗಳನ್ನು ಸ್ನೇಹಿತರು ಮತ್ತು ದೂರವಾಣಿಯ ಸಂಪರ್ಕಗಳಿಗೆ ಮಾತ್ರ ಹೊಂದಿಸಲಾಗುತ್ತದೆ, ಹಾಗೂ ಅವುಗಳನ್ನು ವಿಸ್ತರಿಸಲಾಗುವುದಿಲ್ಲ.

ಸ್ಥಳಗಳ-ಹಂಚಿಕೊಳ್ಳುವಿಕೆಯನ್ನು ಪೂರ್ವನಿಯೋಜಿತವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ಒಂದು ವೇಳೆ Snapchatter ಗಳು ಸ್ಥಳ ಹಂಚಿಕೊಳ್ಳುವಿಕೆ ವೈಶಿಷ್ಟ್ಯವನ್ನು ನಮ್ಮ Snapchat ಮ್ಯಾಪ್‌ನಲ್ಲಿ ಬಳಸಲು ನಿರ್ಧರಿಸಿದರೆ, ಅವರು ಈಗಾಗಲೇ ಸ್ನೇಹಿತರಾಗಿರುವ ಜನರೊಂದಿಗೆ ಮಾತ್ರ ತಮ್ಮ ಸ್ಥಳವನ್ನು ಹಂಚಿಕೊಳ್ಳಬಹುದು. ಅಂಗೀಕೃತ ಸ್ನೇಹಿತರಲ್ಲದವರೊಂದಿಗೆ ತಮ್ಮ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕಾಗಿ ಯಾವುದೇ ಆಯ್ಕೆ ಲಭ್ಯವಿಲ್ಲ.

ಕೌಟುಂಬಿಕ ಕೇಂದ್ರ ಎಂದರೇನು, ಹಾಗೂ ನಾನು ಅದನ್ನು ಹೇಗೆ ಪ್ರವೇಶಿಸಬಹುದು?

ಕೌಟುಂಬಿಕ ಕೇಂದ್ರವು ನಮ್ಮ ಆ್ಯಪ್‌ನಲ್ಲಿ ಲಭ್ಯವಿರುವ ಸಂಪನ್ಮೂಲವಾಗಿದೆ, ಹಾಗೂ ಇದು ಪೋಷಕರಿಗೆ ತಮ್ಮ ಹದಿಹರೆಯದ ಮಕ್ಕಳು ಯಾರೊಂದಿಗೆ ಸ್ನೇಹ ಬೆಳೆಸಿದ್ದಾರೆ ಎಂದು ಹಾಗೂ ಅವರು ಯಾರೊಂದಿಗೆ ಸಂದೇಶಗಳನ್ನು ವಿನಿಮಯಮಾಡಿಕೊಂಡಿದ್ದಾರೆ ಎಂದು ನೋಡಲು, ತಮ್ಮ ಹದಿಹರೆಯದವರ ಸ್ಥಳದ ಮಾಹಿತಿಗಾಗಿ ಕೋರಲು, ತಮ್ಮ ಹದಿಹರೆಯದ ಮಕ್ಕಳು Snapchat ನಲ್ಲಿ ಹೊಂದಿಸಿರುವ ಗೌಪ್ಯತಾ ಮತ್ತು ಸುರಕ್ಷತಾ ಸೆಟ್ಟಿಂಗ್‌ಗಳನ್ನು ವೀಕ್ಷಿಸಲು, ಹಾಗೂ ಇನ್ನೂ ಹೆಚ್ಚಿನ ಸಾಮರ್ಥ್ಯಗಳನ್ನು ಒದಗಿಸುತ್ತದೆ.